ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಇಂದು ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. 2 ಗಂಟೆಗೆ ತುಮಕೂರಿಗೆ ಆಗಮಿಸುವ ಅವರು ಮಧ್ಯಾಹ್ನ 2.30ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ 30 ನಿಮಿಷವಿದ್ದು, ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುವರು. ಅಲ್ಲಿಂದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಟೌನ್ ಹಾಲ್ ಸರ್ಕಲ್ ನಲ್ಲಿ 10 ನಿಮಿಷ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು. ಅಲ್ಲಿಂದ ರಸ್ತೆ ಮೂಲಕ ಕುಣಿಗಲ್ ಗೆ ವಿಶೇಷ ಬಸ್ ನಲ್ಲಿ ಪಯಣ ಮಾಡುವರು,