ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಗದ್ದುಗೆಗೇರಲು ತಾನು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.ಆದರೆ ಅದಕ್ಕೆ ಒಂದು ಷರತ್ತೂ ಇದೆ. ವಿಪಕ್ಷಗಳೆಲ್ಲಾ ಒಂದಾಗಿ ಮಹಾಘಟಬಂಧನ್ ಮಾಡಿಕೊಂಡು ಬಿಜೆಪಿ ನೇತೃತ್ವದ ಎನ್ ಡಿಎಯನ್ನು ಅಧಿಕಾರದಿಂದ ದೂರವಿಡಲು ಸಿದ್ಧತೆ ನಡೆಸಿದೆ. ಈ ಮಹಾಘಟಬಂಧನ್ ನ ಪಕ್ಷಗಳು ರಾಹುಲ್ ನಾಯಕತ್ವವನ್ನು ಒಪ್ಪಿಕೊಂಡಿಲ್ಲ.ಹೀಗಾಗಿ ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿ ಗೆದ್ದರೆ ರಾಹುಲ್ ಪ್ರಧಾನಿಯಾಗುವುದು ಖಚಿತವಿಲ್ಲ. ಒಂದು ವೇಳೆ ಈ ಮಿತ್ರ