ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಎಚ್ ಡಿ ಕುಮಾರಸ್ವಾಮಿಗೆ ಆರಂಭದಲ್ಲೇ ವರುಣನ ಸ್ವಾಗತ ಸಿಕ್ಕಿದೆ.ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಭಾರೀ ಮೋಡ ಕವಿದ ವಾತಾವರಣ ಜತೆಗೆ ಭಾರೀ ಮಳೆಯಾಗುತ್ತಿದ್ದು, ವಿಧಾನಸೌಧದ ಮುಂಭಾಗ ಹಾಕಲಾಗಿರುವ ವೇದಿಕೆ, ಆಸನಗಳು ಅಸ್ತವ್ಯಸ್ತಗೊಂಡಿದೆ.ಕುಮಾರಸ್ವಾಮಿ ಸಿಎಂ ಆಗುವುದನ್ನು ನೋಡಲು ನೆರೆದಿದ್ದ ಜನ ಕುರ್ಚಿಗಳನ್ನೇ ಎತ್ತಿ ಮಳೆಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಗಣ್ಯರು ಕೂರಬೇಕಾಗಿದ್ದ ಆಸನವೂ ಮಳೆಯಿಂದಾಗಿ ಒದ್ದೆಯಾಗಿದೆ. ಹಾಗಿದ್ದರೂ ಇಲ್ಲಿಯೇ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವುದರಿಂದ ವೇದಿಕೆಗೆ ಸಣ್ಣದಾದ