ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ಕೊಡುವ ಪ್ರವಾಸಿಗರು ಈ ರಸ್ತೆಯನ್ನು ನೋಡದೆ ಇರಲು ಸಾಧ್ಯವೇ ಇಲ್ಲ.ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ಗೆ ಸಂಪರ್ಕಿಸುವ ಐಕಾನಿಕ್ ರಸ್ತೆ ರಾಜಪಥ್. ಪ್ರತಿ ವರ್ಷ ಗಣರಾಜೋತ್ಸವದ ಕೇಂದ್ರಬಿಂದುವಾಗುವ ಈ ಪ್ರಮುಖ ರಸ್ತೆಯ ಹೆಸರು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.ಬುಧವಾರ ನವೀಕರಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಇದೇ ವೇಳೆ ರಾಜಪಥ್ ರಸ್ತೆಯ ಹೆಸರನ್ನು ಕರ್ತವ್ಯ ಪಥ್