ನವದೆಹಲಿ : ಐತಿಹಾಸಿಕ ರಾಜಪಥ ಹಾಗೂ ಸೆಂಟ್ರಲ್ ವಿಸ್ಟಾ ಹುಲ್ಲು ಹಾಸುಗಳನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಈ ಮಾರ್ಗ ರೈಸಿನಾ ಹಿಲ್ನಲ್ಲಿರುವ ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಹಾಗೂ ಇಂಡಿಯಾ ಗೇಟ್ ಮೂಲಕ ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗುತ್ತದೆ. ಇದೀಗ ಈ ಹಾದಿಯನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಕೇಂದ್ರ ಪ್ರಕಟಿಸಿದೆ. ದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಅಂಶಗಳನ್ನು ಕೈಬಿಡುವ ಉದ್ದೇಶದಿಂದ ಈ ನಿರ್ಧಾರವನ್ನು