ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಹಲವು ನಿರ್ಬಂಧಗಳನ್ನ ಹಾಕಲಾಗಿದೆ. ಜನರು ಎಲ್ಲೂ ಗುಂಪುಗೂಡದಂತೆ ಕ್ರಮ ವಹಿಸಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ವರ್ಷಾಚರಣೆ ಆಚರಿಸುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಹಾಗು ಸುತ್ತಮುತ್ತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಕಡೆ 380 ಸಿಸಿ ಕ್ಯಾಮೆರಾಗಳನ್ನ ಪೊಲೀಸರು ಅಳವಡಿಸಿದ್ದಾರೆ. ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್, ಎಂಜಿ ರಸ್ತೆಗಳಲ್ಲೇ 300 ಸಿಸಿಟಿವಿಗಳನ್ನ ಹಾಕಲಾಗಿದೆ.ಬೆಂಗಳೂರಿನ ಯಾವುದೇ