ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಸಿಗದೆ ವಂಚಿತರಾದ ಮಾಜಿ ಸಚಿವ ರೇವುನಾಯಕ ಬೆಳಮಗಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ. ಟಿಕೆಟ್ ತಪ್ಪಿದ ಹಿನ್ನಲೆ ಕಲಬುರಗಿಯ ಸಂತೋಷ ಕಾಲೋನಿ ತಮ್ಮ ನಿವಾಸದ ಮುಂದೆ ಬೆಂಬಲಿಗರ ಸಭೆಯನ್ನು ನಡೆಸಿರುವ ರೇವುನಾಯಕ, ಬೆಂಬಲಿಗರ ಆಸೆಯಂತೆ ಬಿಜೆಪಿ ಪಕ್ಷ ತೊರೆದು, ಯಾವುದದರೂ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸುವದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಏಕವಚನದಲ್ಲಿ ಬಿಎಸ್ ವೈ ವಿರುದ್ಧ ವಾಗ್ದಾಳಿ