ವಾಷಿಂಗ್ಟನ್ : ಏಳು ವರ್ಷಗಳ ಹಿಂದೆ ಉಡಾವಣೆಯಾದ ಸ್ಪೇಸ್ಎಕ್ಸ್ ರಾಕೆಟ್ ಮಾರ್ಚ್ ತಿಂಗಳಿನಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.ಫೆಬ್ರವರಿ 2015 ರಲ್ಲಿ ಅಂತರಗ್ರಹ ಕಾರ್ಯಾಚರಣೆಯ ಭಾಗವಾಗಿ ಉಡಾವಣೆಯಾದ ಫಾಲ್ಕನ್ 9 ಬೂಸ್ಟರ್ ರಾಕೆಟ್ ಇಂಧನ ಖಾಲಿಯಾಗಿ ಕಕ್ಷೆಯಲ್ಲಿ ಅಸ್ತವ್ಯಸ್ತವಾಗಿ ಸುತ್ತುತ್ತಿದೆ.ಈಗ ನಾಲ್ಕು ಟನ್ ತೂಕದ ಸೆಕೆಂಡ್ಗೆ 2.58 ಕಿ.ಮೀ ವೇಗದಲ್ಲಿ ಸಂಚರಿಸುವ ರಾಕೆಟ್ ಚಂದ್ರನನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಯಾವುದೇ ಉದ್ದೇಶವಿಲ್ಲದೇ ಬಾಹ್ಯಾಕಾಶದ ಕಸವೊಂದು ಚಂದ್ರನ ಮೇಲೆ