ಬೆಂಗಳೂರು: ನಾವು ಚಿಕ್ಕವರಿದ್ದಾಗ ಹೋಗುತ್ತಿದ್ದ ಹಳ್ಳಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯೆಂದರೆ ಒಂದು ದೊಡ್ಡ ಹಬ್ಬವೇ ಸರಿ. ಆದರೆ ಇಂದಿನ ನಗರದ ಶಾಲೆಗಳಲ್ಲಿ ಇದು ಕಡಿಮೆಯಾಗುತ್ತದೆ.ಬೆಂಗಳೂರಿನಂತಹ ನಗರಗಳಲ್ಲಿ ನಾಯಿ ಕೊಡೆಯಂತೆ ಬೀದಿಗೊಂದು ಶಾಲೆಗಳಿವೆ. ಆದರೆ ಸ್ವಾತಂತ್ರ್ಯ ದಿನವನ್ನು ಆಚರಿಸುವುದು ಕೆಲವು ಶಾಲೆಗಳಲ್ಲಿ ಮಾತ್ರ. ಮಿಕ್ಕಂತೇ ಈ ದಿನ ರಜಾ ಮಜಾ ದಿನ ಎಂದೇ ಮಕ್ಕಳು ಅಂದುಕೊಂಡುಬಿಟ್ಟಿದ್ದಾರೆ.ಸ್ಥಳದ ಕೊರತೆಯೋ, ಶಿಕ್ಷಕರ, ಆಡಳಿತ ಮಂಡಳಿಯ ಉದಾಸೀನವೋ. ಕೆಲವು ಶಾಲೆಗಳಲ್ಲಿ ಧ್ವಜಾರೋಹಣ ಮಾಡುವ ಔದಾರ್ಯವೂ ತೋರುವುದಿಲ್ಲ.