ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಸಲು ಸೆಲ್ಕೋ ಶೀತಲ ಘಟಕ

ಬೆಂಗಳೂರು| Ramya kosira| Last Modified ಗುರುವಾರ, 5 ಆಗಸ್ಟ್ 2021 (09:14 IST)
 ಬೆಂಗಳೂರು (ಆ.05): ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ನಗರದ ಸೆಲ್ಕೋ ಫೌಂಡೇಶನ್ ರಾಜ್ಯದ ಹಲವೆಡೆ ಶೀತಲ ಕೇಂದ್ರ ಘಟಕಗಳನ್ನು ಪ್ರಾರಂಭಿಸುತ್ತಿದೆ. ಹೀಗೂ ಆದಾಯ ಗಳಿಸಬಹುದು ಎಂಬುದನ್ನು ಅನ್ನದಾತರಿಗೆ  ಮನನ ಮಾಡಿಕೊಡಲು ಸೆಲ್ಕೋ ಮುಂದಾಗಿದೆ.
ಹಣ್ಣು ತರಕಾರಿಗಳನ್ನು ಮಾರುಕಟ್ಟೆಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಅಸಾಧ್ಯವಾದಾಗ ಬೆಲೆ ಕಡಿಮೆಯಾದಾಗ ಶೇಖರಿಸಿಡಲು ಮೌಲ್ಯವರ್ಧಿತ ಉತ್ತನ್ನಗಳ ತಯಾರಿಕೆಗೆ ಇದರಿಂದ ಅನುಕೂವಾಗಲಿದೆ. ರೈತ  ಉತ್ಪಾದಕ ಸಂಘಗಳಿಗೆ ಶೀತಲಗೃಹ  ಘಟಕಗಳಿಗೆ  ಉಸ್ತುವಾರಿ ವಹಿಸಲಾಗುವುದು. ಇಂತಹ ಘಟಕಗಳ ಸ್ಥಾಪನೆಗೆ ಸರ್ಕಾರ ಸರ್ಕಾರೇತರ ಸಂಸ್ಥೆಗಳೂ ಮುಂದೆ ಬಂದರೆ ರೈತರ ಆದಾಯ ವೃದ್ಧಿಯಾಗಲಿದೆ. ಕೊರೋನಾ ಸಂಕಷ್ಟದಲ್ಲಿ ರೈತರು ತಾವು  ಬೆಳೆದ ಹೂವು ಹಣ್ಣು ತರಕಾರಿಯನ್ನು  ಮಾರಾಟ ಮಾಡಲಾಗದೇ ಸಂಕಷ್ಟ ಅನುಭವಿಸಿದ್ದನ್ನು ನೋಡಿ ಇದಕ್ಕೆ ಪರಿಹಾರ ರೂಪಿಸಬೇಕೆಂಬ ಸಂಕಲ್ಪದಿಂದ ಶೀತಲ ಗೃಹಗಳ ಸ್ಥಾಪನೆಗೆ ಸೆಲ್ಕೋ ಹೆಜ್ಜೆ ಇಟ್ಟಿದೆ. ಬೆಲೆ ಕಡಿಮೆ ಇದ್ದಾಗ ರೈತರು ತಾವು ಬೆಳೆದ ಬೆಳೆಗಳನ್ನು ಶೀತಲ ಗೃಹಗಳಲ್ಲಿಟ್ಟು ನಂತರ ಬೆಲೆ ಸಿಕ್ಕಾಗ ಮಾರಾಟ ಮಾಡಲು ಇದರಿಂದ ಅನುಕೂಲವಾಗಲಿದೆ.
ಐದು ಶೀತಲ ಘಟಕ ಸ್ಥಾಪನೆ : ಸೆಲ್ಕೋ ಫೌಂಡೇಷನ್ಸ್ ರಾಜ್ಯದಲ್ಲಿ  ಒಟ್ಟು 18 ಶೀತಲಗೃಹ ಘಟಕಗಳ ಸ್ಥಾಪನೆಗೆ ಯೋಜನೆ ಹಾಕಿಕೊಂಡಿದ್ದು ಇದೇ ತಿಂಗಳಲ್ಲಿ 5 ಘಟಕಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ.
ಮೊದಲಿಗೆ ಬಾಗಲಕೋಟೆ ಜಲ್ಲೆಯ ಘಟಕಕ್ಕೆ ಆ.5ರಂದು ಚಾಲನೆ ನೀಡಲಾಗುವುದು. ಬಳಿಕ ಹಂತಹಂತವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು, ಬೆಂಗಳೂರು ನಗರದ ಆನೇಕಲ್, ತುಮಕೂರಿನ ಶಿರಾ, ಬರಗೂರು ಮತ್ತು ಗುಬ್ಬಿಯ  ತ್ಯಾಗರ್ತೂರುಗಳಲ್ಲಿ ಘಟಕ ಆರಂಭಿಸಲಿದೆ.
ಪ್ರತೀ ಘಟಕಕ್ಕೆ  13 ಲಕ್ಷ ರುಪಾಯಿ ವೆಚ್ಚವಾಗಲಿದ್ದು 5 ಮೆಟ್ರಿಕ್ ಟನ್ ಸಾಮರ್ಥ್ಯವಿರಲಿದೆ.
 
ಇದರಲ್ಲಿ ಇನ್ನಷ್ಟು ಓದಿ :