ಬೆಳಗಾವಿ : ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಾತ್ರೆಯಿಂದ ಕಳೆಗಟ್ಟುತ್ತಿದ್ದ ಕುಂದಾನಗರಿಯಲ್ಲೀಗ ಮೂರು ವರ್ಷಕ್ಕೊಮ್ಮೆ ಬಂದಿರುವ ಜಾತ್ರೆಯಲ್ಲೂ ಅದೇ ಕಳೆ.ಆದರೆ ಅಬ್ಬರ, ಹಾರಾಟ ಮಾತ್ರ ತುಸು ಕುಗ್ಗಿದೆ. ಸಮಗಾಳಿಗೆ ಸಮ ಎಂಬಂತಹ ಬಿಸಿಲು… ಸಮ ಬಿಸಿಲಿಗೆ ಸಮ ಶೀತ ಎಂಬ ವಾತಾವರಣದಲ್ಲಿ ಮೂರು ವರ್ಷದ ಬಳಿಕ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ.ಮತಾಂತರದ ನಿಷೇಧ ಕಾಯ್ದೆಯ ಚರ್ಚೆಯ ಬೆಂಕಿಗೆ ಸಚಿವ ಸುನಿಲ್ ಕುಮಾರ್ ಲವ್ ಜಿಹಾದ್ ಎಂಬ ತುಪ್ಪವನ್ನು ಸುರಿಯುವ ಮೂಲಕ ಅಧಿವೇಶನದ