ಬೆಂಗಳೂರು: ಮೈಸೂರಿನಲ್ಲಿ ದಸರಾ ಉತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದ ಬಗ್ಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಮೈಸೂರು ದಸರಾ ಸ್ಟ್ರೀಟ್ ಫೆಸ್ಟಿವಲ್ ಆಯೋಜಿಸಿದ್ದ ಪ್ರವಾಸೋಧ್ಯಮ ಇಲಾಖೆ ಈ ಕಾರ್ಯಕ್ರದಲ್ಲಿ ಯುವ ಸಮೂಹ ಟಪ್ಪಾಂಗುಚ್ಚಿ ನೃತ್ಯ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಶೋಭಾ ಕೆಂಡ ಕಾರಿದ್ದಾರೆ.ಟಪ್ಪಾಂಗುಚ್ಚಿ ನೃತ್ಯ ಮಾಡಲು ಅನುವು ಮಾಡಿಕೊಡುವ ಮೂಲಕ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಾಡಿನ ಪರಂಪರೆಯನ್ನು ಮೂಲೆಗುಂಪು