ಶಿವಮೊಗ್ಗ: ಈ ಬಾರಿ ಪಠ್ಯ ಕಡಿತಗೊಳಿಸದೆ ಶಿಕ್ಷಕರ ರಜೆ ಕಡಿತಗೊಳಿಸಲಾಗುವುದು. ರಜೆ ಕಡಿಮೆಮಾಡಿ ಕಲಿಕಾ ಅವಧಿ ನಷ್ಟ ಸರಿದೂಗಿಸಲು ಚಿಂತನೆ ನಡೆಸಲಾಗಿದೆ. ಪಠ್ಯ ಕಡಿತಗೊಳಿಸದೆ ಪಾಠಗಳನ್ನು ಪೂರ್ಣಗೊಳಿಸುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರುವ ಪಠ್ಯ ಪೂರ್ಣಗೊಳಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಪಠ್ಯ ಕಡಿತಗೊಳಿಸಿದರೆ ಅವರಿಗೆ ನಷ್ಟವಾಗುತ್ತದೆ. ಕಳೆದ ಒಂದುವರೆ ವರ್ಷದಿಂದ ಮಕ್ಕಳಿಗೆ ಸಮರ್ಪಕವಾಗಿ ಕಲಿಕೆ