ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಕೊರೊನಾದ ರೂಪಾಂತರಗಳೂ ದಾಂಗುಡಿ ಇಡುತ್ತಿವೆ. ಈ ಮಧ್ಯೆ ಇನ್ನೊಂದು ಆತಂಕಕಾರಿ ಸಂಗತಿ ಎದುರಾಗಿದ್ದು ಮಧ್ಯಪ್ರದೇಶದ ಅಗರ್ ಮಲ್ವಾ ಜಿಲ್ಲೆಯಲ್ಲಿ 48 ಕಾಗೆಗಳ ಮೃತದೇಹ ಸಿಕ್ಕಿದ್ದು, ಅವುಗಳಲ್ಲೀಗ ಹಕ್ಕಿಜ್ವರ ಸೋಂಕು(H5N8) ದೃಢಪಟ್ಟಿದೆ. ಅಂದಹಾಗೆ ಈ 48 ಕಾಗೆಗಳು ಭೋಪಾಲ್ನಿಂದ 180 ಕಿಮೀ ದೂರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಮೃತಪಟ್ಟವಾಗಿವೆ. ಇಷ್ಟೊಂದು ಕಾಗೆಗಳು ಸತ್ತ ಹಿನ್ನೆಲೆಯಲ್ಲಿ ಅವುಗಳ ಸ್ಯಾಂಪಲ್ ತಪಾಸಣೆಗಾಗಿ ಲ್ಯಾಬೋರೇಟರಿಗೆ ಕಳಿಸಲಾಗಿತ್ತು. ತಪಾಸಣೆ ನಡೆಸಿದಾಗ ಅವುಗಳಲ್ಲಿ