ಬೆಂಗಳೂರು : ಹಿಜಬ್ ವಿವಾದದ ಕಿಡಿ ಈಗ ರೂಪಾಂತರಗೊಂಡಿದೆ.ಶಾಲಾ-ಕಾಲೇಜುಗಳಲ್ಲಿ ಅಷ್ಟೇ ಇದ್ದ ವಿವಾದ ಈಗ ಹೊಸ ತಿರುವು ಪಡೆದಿದ್ದು, ಧರ್ಮ ಧರ್ಮಗಳ ನಡುವೆ ದೊಡ್ಡ ಕಂದಕವೇ ನಿರ್ಮಾಣಗೊಳ್ತಿದೆ.ನಿನ್ನೆವರೆಗೂ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ವ್ಯಾಪಾರ ಧರ್ಮಯುದ್ಧ, ಈಗ ಕೋವಿಡ್ ವೈರಸ್ಗಿಂತಲೂ ವೇಗವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳತೊಡಗಿದೆ.ಬೆಂಗಳೂರಿನಲ್ಲಿಯೂ ಹಿಂದೂ ಸಂಘಟನೆಗಳು ಬಹಿಷ್ಕಾರ ಚಳವಳಿ ಶುರು ಮಾಡಿದ್ದಾರೆ. ಹಲವು ಹಿಂದೂ ದೇಗುಲಗಳಿಗೆ ಸೇರಿದ ಅಂಗಡಿಗಳಿಂದ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಶುರುವಾಗಿವೆ.ಉಪ್ಪಾರಪೇಟೆಯ ಆಂಜನೇಯಸ್ವಾಮಿ ದೇಗುಲದ ಮುಂದಿರುವ