ಸಿದ್ದರಾಮಯ್ಯನವರಿಗೆ ರಾಜ್ಯದೆಲ್ಲೆಡೆ ವರ್ಚಸ್ಸಿದೆ.ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೂ ಗೆಲ್ತಾರೆ. ಅವರನ್ನ ಗೆಲುವನ್ನ ಯಾರಿಂದಲೂ ತಡೆಯೋಕೆ ಆಗಲ್ಲ ಹೀಗಂತ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಲೇವಡಿ ಮಾಡೋದು, ಸೋಲಿಸ್ತೀವಿ ಅನ್ನೋದು ಅದು ವಿರೋಧಿಗಳ ನೀತಿ.ವರುಣದಲ್ಲಿ ಬಿಎಸ್ ವೈ ಪುತ್ರನನ್ನ ನಿಲ್ಲಿಸ್ತೀವಿ ಅಂದರೆ ನಾವು ಭಯ ಪಡುವ ಆಗತ್ಯವಿಲ್ಲ.ಅವರು ನಮ್ಮನ್ನು ಸೋಲಿಸೋಕೆ ಏನು ತಂತ್ರ ಮಾಡ್ತಾರೋ ಅದಕ್ಕೆ ಪ್ರತಿತಂತ್ರ ಮಾಡ್ತೀವಿ ಅಂತ ಹೇಳಿದ್ದಾರೆ.