ನವದೆಹಲಿ: ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಿನ್ನೆಯೇ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಇನ್ನೂ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.ಹೈಕಮಾಂಡ್ ಜತೆ ಖಾತೆ ಹಂಚಿಕೆ ಕುರಿತಂತೆ ಚರ್ಚಿಸಲು ನಿನ್ನೆಯೇ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ದೆಹಲಿಗೆ ತೆರಳಿತ್ತು. ಆದರೆ ನಿನ್ನೆ ನಡೆದ ಸಭೆಯಲ್ಲಿ ಯಾವುದೂ ಅಂತಿಮವಾಗಿಲ್ಲ.ಇಂದೂ ಕೂಡಾ ದೆಹಲಿಯಲ್ಲೇ ಇರುವ ಸಿದ್ದರಾಮಯ್ಯ ಕರ್ನಾಟಕ ಭವನದಲ್ಲಿ ಇಂದು ಸಚಿವ ಸ್ಥಾನದ ಆಕಾಂಕ್ಷಿಗಳ ಅಹವಾಲು ಸ್ವೀಕರಿಸುತ್ತಿದ್ದಾರೆ. ಆದರೆ ಸಚಿವ ಸ್ಥಾನಕ್ಕಾಗಿ