ಬೆಂಗಳೂರು: ನಿನ್ನೆ ಕಾಂಗ್ರೆಸ್ ಪಕ್ಷದ ವಿಧಾನಸಭೆ ಮತ್ತು ವಿಧಾನಪರಿಷತ್ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದರು.ಆದರೆ ಔತಣಕೂಟದಲ್ಲಿ ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡಿರುವ ಶಾಸಕರು ಭಾಗವಹಿಸಲಿಲ್ಲ. ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ರೋಷನ್ ಬೇಗ್, ಕೃಷ್ಣಪ್ಪ, ಸಿಎಸ್ ಶಿವಳ್ಳಿ, ಎಚ್ ಎಂ ರೇವಣ್ಣ ಔತಣಕೂಟಕ್ಕೆ ಬಾರದೇ ಮುನಿಸು ತೋರಿದರು. ಡಿಸಿಎಂ ಪರಮೇಶ್ವರ್ ಆಗಮಿಸಿದರಾದರೂ ಬೇಗನೇ ನಿರ್ಗಮಿಸಿದರು.ನಗರದ ಪಂಚತಾರಾ