ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಡಿಸಿಎಂ ಆಗಿ ಪರಮೇಶ್ವರ್ ಇದ್ದರೂ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಇದ್ದರೂ ಪಕ್ಷದ, ನಾಯಕರ ಸಂಪೂರ್ಣ ಹಿಡಿತ ಹೊಂದಿರುವ ಸಿದ್ದರಾಮಯ್ಯನವರೇ ಟ್ರಬಲ್ ಶೂಟರ್ ಎನಿಸಿಕೊಂಡಿದ್ದಾರೆ.ಸಿದ್ದರಾಮಯ್ಯ ವಿದೇಶ ಪ್ರವಾಸ ತೆರಳುತ್ತಿದ್ದಂತೆ ಉಂಟಾಗಿದ್ದ ಬೆಳಗಾವಿ ಭಿನ್ನಮತ ಅವರು ರಾಜ್ಯಕ್ಕೆ ಮರಳಿದ ಮೇಲೆ ಎಲ್ಲಾ ನಾಯಕರ ಜತೆ ಮಾತುಕತೆ ನಡೆಸಿದ ಮೇಲೆ ಸದ್ಯಕ್ಕೆ ತಣ್ಣಗಾಗಿದೆ.ಇದೀಗ ಮೇಯರ್ ಆಯ್ಕೆ ವಿಚಾರದಲ್ಲೂ ಎಲ್ಲಾ ನಾಯಕರು ಸಿದ್ದರಾಮಯ್ಯ ನಿವಾಸದಲ್ಲಿ ಚರ್ಚೆ ನಡೆಸಿದ್ದು, ಅಂತಿಮ