ನವದೆಹಲಿ : ನಾವು ಹಾಕಿಸಿಕೊಳ್ಳುವ ಯಾವುದೇ ಕೋವಿಡ್ ಲಸಿಕೆ ಖಾಯಂ ಆಗಿ ನಮ್ಮ ದೇಹಕ್ಕೆ ರಕ್ಷಣೆ ಕೊಡೋದಿಲ್ಲ. ಹಾಗಾದರೆ ಎಷ್ಟು ದಿನ ಎಂದು ನಮ್ಮ ದೇಹವನ್ನು ಕೋವಿಡ್ ವೈರಸ್ನಿಂದ ಕಾಪಾಡುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಇದಕ್ಕೆ ಯಾರ ಬಳಿಯೂ ಖಚಿತ ಉತ್ತರ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಪ್ರಕಾರ, ಕೋವಿಡ್ ಲಸಿಕೆ ನಮ್ಮ ದೇಹದಲ್ಲಿ ಕನಿಷ್ಠ ಒಂದು ವರ್ಷವಾದರೂ ರಕ್ಷಣೆ ಕೊಡಬಲ್ಲುದಂತೆ.ವ್ಯಾಕ್ಸಿನ್ನಿಂದ