ಬೆಂಗಳೂರು:ಕೊರೊನಾ ಹಿನ್ನೆಲೆ ನಗರ ಪ್ರದೇಶ ತೊರೆದು ಗ್ರಾಮೀಣ ಪ್ರದೇಶಗಳಿಗೆ ಪೋಷಕರು ಮುಖ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಪೋಷಕರು ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆನಾ ಎಂದು ಮೂಗು ಮುರಿಯುತ್ತಿದ್ದವರು ಈಗ ಬೆರಳಿಟ್ಟುಕೊಳ್ಳುವ ಪ್ರಸಂಗ ಎದುರಾಗ್ತಿದೆ. ಖಾಸಗಿ ಶಾಲೆಗೆ ಸೇರಿಸುತ್ತಿದ್ದ ಮಕ್ಕಳು ಕೊರೊನಾದಿಂದಾಗಿ ಸರ್ಕಾರಿ ಶಾಲೆ ದಾಖಲಾಗುತ್ತಿದ್ದಾರೆ. ಕೊರೊನಾ ಕಳೆದ ಒಂದೂವರೆ ವರ್ಷದಿಂದಲೂ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಆನ್ ಲೈನ್, ಯೂಟ್ಯೂಬ್ ಪಾಠ ಜಂಜಾಟದ ನಡುವೆ ಪೋಷಕರಿಗೆ ಫೀಸ್