ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರಿಂದು 14ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್ನಲ್ಲಿ ಗ್ಯಾರಂಟಿಗಳೇ ಸವಾಲುಗಳಾಗಿವೆ. ಹಾಗಾಗಿ ಗ್ಯಾರಂಟಿಗಳನ್ನ ಜಾರಿಗೆ ಅನುದಾನ ಸರಿದೂಗಿಸುವ ಜೊತೆಗೆ ಹೊಸ ಭರವಸೆಗಳನ್ನು ಹುಟ್ಟಿಸುತ್ತಾ ಅನ್ನೋದು ಕುತೂಹಲವಾಗಿದೆ.5 ಗ್ಯಾರಂಟಿ ಅನುಷ್ಠಾನದ ಹೊರೆಯೊಂದಿಗೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಜವಬ್ದಾರಿಯೂ ಸಿದ್ದರಾಮಯ್ಯ ಅವರ ಮೇಲಿದೆ. ಸಿಎಂ ಸಿದ್ದರಾಮಯ್ಯ ಮುಂದಿರುವ ಆರ್ಥಿಕ ಸಂಕಷ್ಟದ ಸವಾಲಿನಲ್ಲಿ ಬಜೆಟ್ ಗಾತ್ರ ಮತ್ತು ರಾಜ್ಯದ ಸಾಲದ ಹೊರೆ ಎರೆಡು ಹೆಚ್ಚಾಗುವ ಸಾಧ್ಯತೆ