ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮಾಸಾಂತ್ಯಕ್ಕೆ ಆರು ತಿಂಗಳು ಪೂರೈಸುತ್ತಿರುವ ಬೆನ್ನಲ್ಲೇ ಸಂಪುಟ ಸರ್ಜರಿಗೆ ಒತ್ತಡ ಹೆಚ್ಚುತ್ತಿದೆ.ಮುಂದಿನ 15 ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗದಿದ್ದರೆ ಇನ್ನೂ ಎರಡು ತಿಂಗಳ ಕಾಲ ನಡೆಯುವ ಸಾಧ್ಯತೆ ಕಡಿಮೆ. ಹಾಗಾಗಿ ಸಚಿವಾಕಾಂಕ್ಷಿಗಳು ತೆರೆಮರೆಯಲ್ಲೇ ಒತ್ತಡ ತಂತ್ರ ಮುಂದುವರಿಸಿದ್ದಾರೆ.ಈವರೆಗೆ ಹೆಚ್ಚು ಬಾರಿ ಅಧಿಕಾರ ಅನುಭವಿಸಿದವರು, ಅವಕಾಶ ನೀಡಿದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದವರು, ಮಹತ್ವದ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸದೆ ವಿವಾದಕ್ಕೆ ಸಿಲುಕಿದವರನ್ನು