ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡುವಿನಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಮಾದಪ್ಪನ 108 ಅಡಿಯ ಬೃಹತ್ ಪ್ರತಿಮೆ ಕಾಮಗಾರಿ ಭರದಿಂದ ಸಾಗುತ್ತಿದೆ. 20 ಎಕರೆ ಪ್ರದೇಶದಲ್ಲಿ ಮಹದೇಶ್ವರರು ಹುಲಿ ಮೇಲೆ ಕುಳಿತ ಭಂಗಿಯ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಪ್ರತಿಮೆಯ ಅಡಿಪಾಯವಾಗಿ 20 ಅಡಿಯ ಪೀಠವು ಗುಹೆ ಮಾದರಿಯಲ್ಲಿರಲಿದೆ. ಇದರ ನಿರ್ಮಾಣ ಈಗ ಸಾಗಿದೆ. ಗುಹೆ ಒಳಗಡೆ ಮಾದಪ್ಪನ ಲೀಲೆಗಳನ್ನು ಸಾರುವ ಮಾಹಿತಿ ಇರಲಿದೆ.