ಕೀವ್ : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ನ್ಯಾಟೋ ಸದಸ್ಯತ್ವವನ್ನು ಪಡೆಯದಿರುವ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿದ್ದು,ಇನ್ನಾದರೂ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಶಮನಗೊಂಡು ಯುದ್ಧ ನಿಲ್ಲುವುದೋ ಎಂಬ ಕುತೂಹಲ ಮೂಡಿದೆ. ಕದನ ವಿರಾಮ, ರಷ್ಯಾದ ಪಡೆಗಳ ವಾಪಸಾತಿ ಮತ್ತು ಉಕ್ರೇನ್ನ ಭದ್ರತೆಯ ಭರವಸೆಗೆ ಬದಲಾಗಿ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಸದಸ್ಯತ್ವವನ್ನು ಪಡೆಯದಿರಲು ಉಕ್ರೇನ್ನಿಂದ ಬದ್ಧತೆಯನ್ನು ಚರ್ಚಿಸಲು ಸಿದ್ಧ