ಬೆಂಗಳೂರು : ನಗರದಲ್ಲಿ ಕುರಿ-ಕೋಳಿ ವಧೆಗೆ ಸ್ಟನ್ನಿಂಗ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.ಹಲಾಲ್ ಆಗಲೀ, ಜಟ್ಕಾವಾಗಲೀ ಸ್ಟನ್ನಿಂಗ್ ರೂಲ್ಸ್ ಪಾಲಿಸಬೇಕು ಎಂದು ಬಿಬಿಎಂಪಿಗೆ ಪಶು ಸಂಗೋಪನಾ ಇಲಾಖೆ ಸೂಚನೆ ನೀಡಿದೆ.`ಸ್ಟನ್ನಿಂಗ್’ ಅಂದ್ರೆ ಪ್ರಾಣಿವಧೆಗೆ ಮೊದಲು ಪ್ರಜ್ಞೆ ತಪ್ಪಿಸುವುದು. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗೆ ಹೆಚ್ಚು ಹಿಂಸೆಯಾಗುವುದಿಲ್ಲ. ಹಾಗಾಗಿ ಇನ್ಮುಂದೆ ಪ್ರಾಣಿವಧೆಗೂ ಮುನ್ನ ಸ್ಟನ್ನಿಂಗ್ ಕಡ್ಡಾಯಗೊಳಿಸಲಾಗಿದ್ದು, ಸ್ಟನ್ನಿಂಗ್ ಇಲ್ಲದಿದ್ದರೆ ಹೊಸ ಅಂಗಡಿಗಳಿಗೆ ಅನುಮತಿ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸ್ಟನ್ನಿಂಗ್ ಪ್ರಾಣಿವಧೆಯಲ್ಲಿ ಎರಡು ವಿಧಾನಗಳಿದ್ದು, ಪ್ರಜ್ಞೆ