ನವದೆಹಲಿ : ಟೊಮೆಟೋ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಬ್ಸಿಡಿ ದರದಲ್ಲಿ ಮಾರಾಟ ನಡೆಸುತ್ತಿರುವ ಕೇಂದ್ರ ಸರ್ಕಾರ ಇದೀಗ ಟೊಮೆಟೋ ಸಬ್ಸಿಡಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇದೀಗ ಕಿಲೋಗೆ 70 ರುಪಾಯಿಯಂತೆ ಸರ್ಕಾರದ ವತಿಯಿಂದ ಟೊಮೆಟೋ ಮಾರಾಟವಾಗುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಸಂಸ್ಥೆಗಳ ರೀಟೇಲ್ ಔಟ್ಲೆಟ್ಗಳ ಮೂಲಕ ಮತ್ತು ಮೊಬೈಲ್ ವ್ಯಾನ್ಗಳ