ಬೆಂಗಳೂರು : ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸುದೀಪ್ ಅವರು ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡಬಾರದು ಎಂದು ವಿರೋಧ ವ್ಯಕ್ತವಾಗಿದ್ದು ಇದಕ್ಕೆ ಸುದೀಪ್ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟರ್ ಮೂಲಕ ಸ್ಪಷ್ಟನೆ ನೀಡಿದ ಸುದೀಪ್ ಅವರು, ನಾನು ರಾಜಕೀಯ ಪ್ರಚಾರದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡುವುದು ಸುಳ್ಳು.