ಸುಧಾಮೂರ್ತಿಯವರು ಜನರಿಗಾಗಿ ಏನೆಲ್ಲ ಮಾಡಿದ್ದಾರೆ, ಮಾಡುತ್ತಿದ್ದಾರೆ ಅನ್ನೋದು ಬಿಗ್ ಬಿ ಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಮತ್ತೊಂದು ಸಾಕ್ಷಿಯೆಂದರೆ ಜಯದೇವ ಹೃದ್ರೋಗ ಸಂಸ್ಥೆ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಸುಸಜ್ಜಿತ 350 ಬೆಡ್ ಸಾಮರ್ಥ್ಯದ ಈ ಹೆಚ್ಚುವರಿ ಹೃದ್ರೋಗ ಘಟಕ. ಹಿಂದೊಮ್ಮೆ ಸುಧಾಮೂರ್ತಿ ಅವರು ತಮ್ಮ ಪತಿ ಹಾಗೂ ಇನ್ಫೋಸಿಸ್ ಸಂಸ್ಥೆ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಬೇರೆ ಬೇರೆ ಊರುಗಳಿಂದ ಬಂದಿದ್ದ ಅನೇಕ