ನವದೆಹಲಿ: ಮುಸ್ಲಿಮರು ಪ್ರಾರ್ಥನೆ ಮಾಡಲು ಮಸೀದಿಯ ಅಗತ್ಯವಿದೆಯೇ ? ಈ ಗೊಂದಲಗಳಿಗೆ ಇಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಲಿದೆ.ಮುಸ್ಲಿಮರ ಪ್ರಾರ್ಥನೆಗೆ ಮಸೀದಿಯ ಅಗತ್ಯವಿಲ್ಲ. ಅವರು ಎಲ್ಲಿ ಬೇಕಾದರೂ ನಮಾಜ್ ಮಾಡಿಕೊಳ್ಳಬಹುದು. ಅಗತ್ಯ ಬಂದಾಗ ಸರ್ಕಾರ ಮಸೀದಿಗಳನ್ನು ವಶಪಡಿಸಿಕೊಳ್ಳಬಹುದು ಎಂಬ 1994 ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.ಇದು ಬಾಬ್ರಿ ಮಸೀದಿ, ರಾಮಜನ್ಮಭೂಮಿ ಪ್ರಕರಣಕ್ಕೆ ಸಂಬಂಧವಿರುವ ಕಾರಣ ಈ ತೀರ್ಪು ಅತ್ಯಂತ ಮಹತ್ವದ್ದಾಗಲಿದೆ.