ಹೊಸದಿಲ್ಲಿ : ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬ ಹೆಚ್ಐವಿಯಿಂದ ಬಳಲುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಪಮಿಡಿಘಂಟಂ ಶ್ರೀ ನರಸಿಂಹ ಅವರಿದ್ದ ಪೀಠವು, ಆ ವ್ಯಕ್ತಿಯ ಎಚ್ಐವಿ ವೈದ್ಯಕೀಯ ವರದಿಯನ್ನು ಗಮನಿಸಿ ಜಾಮೀನು ನೀಡಿದೆ. ವ್ಯಕ್ತಿಯು ಹೆಚ್ಐವಿಯಿಂದ ಬಳಲುತ್ತಿದ್ದಾನೆ. ಅಲ್ಲದೇ ರೋಗನಿರೋಧಕ ಶಕ್ತಿಯ ಕೊರತೆ ಇದೆ. ಹೀಗಾಗಿ ಷರತ್ತುಗಳನ್ವಯ ಜಾಮೀನು ಮಂಜೂರು ಮಾಡಲಾಗುವುದು ಎಂದು ಕೋರ್ಟ್ ತಿಳಿಸಿದೆ. ಅವರ ವಿರುದ್ಧ ಹಲವು