ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ

ನವದೆಹಲಿ| Ramya kosira| Last Modified ಮಂಗಳವಾರ, 14 ಸೆಪ್ಟಂಬರ್ 2021 (12:24 IST)
ಪೆಟ್ರೋಲ್, ಎಲ್ಪಿಜಿ, ದಿನಸಿ, ಅಡುಗೆ ಎಣ್ಣೆ ಬೆಲೆಗಳ ಏರಿಕೆಯಂತಹ ಆರ್ಥಿಕ ಹೊರೆಯ ಸುದ್ದಿಗಳನ್ನೇ ಕೇಳುತ್ತಿರುವ ಜನರಿಗೆ ಜಿಯೋ ಕಂಪನಿಯು ಸಿಹಿ ಸುದ್ದಿ ನೀಡಿದೆ.

ಕೇವಲ 75 ರೂ.ಗಳಲ್ಲಿ ಅನಿಯಮಿತ ವಾಯ್ಸ್ ಕಾಲ್ಗಳು, ದಿನವೊಂದಕ್ಕೆ 100 ಎಂಬಿ ಉಚಿತ ಡಾಟಾ, 50 ಎಸ್ಎಂಎಸ್ಗಳ ಭರ್ಜರಿ ಕೊಡುಗೆಯನ್ನು ತನ್ನ ಜಿಯೋ ಫೋನ್ ಬಳಸುತ್ತಿರುವ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲೆದೇ ಜಿಯೋ ಆಯಪ್ ಮೂಲಕ ಜಿಯೋ ಟಿವಿ, ಸಿನೆಮಾ, ಜಿಯೋ ನ್ಯೂಸ್ ಸೇವೆಗಳನ್ನು ಕೂಡ ಪಡೆಯಬಹುದಾಗಿದೆ.
ಈ ಪ್ಲಾನ್ ಅವಧಿ ಒಟ್ಟು 28 ದಿನಗಳದ್ದು. ಜತೆಗೆ ಹೆಚ್ಚುವರಿಯಾಗಿ 200 ಮೆಗಾಬೈಟ್ ಡಾಟಾ ಕೂಡ ಬಳಕೆದಾರರಿಗೆ ಹೆಚ್ಚುವರಿ ಶುಲ್ಕದ ಹೊರತಾಗಿ ಸಿಗಲಿದೆ. ಜಿಯೋ ಫೋನ್ ಬಳಕೆದಾರರಿಗೆ 39 ರೂ. ಹಾಗೂ 69 ರೂ.ನ ಪ್ಲ್ಯಾನ್ಗಳನ್ನು ಇತ್ತೀಚೆಗೆ ಕಂಪನಿ ರದ್ದುಗೊಳಿಸಿತ್ತು. ಇದರ ಬದಲಾಗಿ ಹೆಚ್ಚು ಲಾಭದ 75 ರೂ. ಪ್ಲಾನ್ ಪರಿಚಯಿಸಿದೆ.
ಇನ್ನೂ ಒಂದು ಸಿಹಿ ಸುದ್ದಿ ಎಂದರೆ, ಗೂಗಲ್ ಸ್ಮಾರ್ಟ್ಫೋನ್ ಜತೆಗೆ ಜಿಯೋ ಸಿಮ್ ಅಳವಡಿಸಲಾಗಿರುವ ಬಹುನಿರೀಕ್ಷಿತ ಪ್ಲಾನ್ ಇದೇ ದೀಪಾವಳಿಗೆ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಇದನ್ನು ಟೆಲಿಕಾಂ ಕ್ಷೇತ್ರದ ಕ್ರಾಂತಿಕಾರಿ ನಡೆ ಎಂದೇ ಹೇಳಲಾಗುತ್ತಿದೆ
 
ಇದರಲ್ಲಿ ಇನ್ನಷ್ಟು ಓದಿ :