ಕೊರೊನಾ ಎರಡನೇ ಅಲೆಯ ನಂತರ ರೈಲ್ವೆ ಇಲಾಖೆ ತನ್ನ ಸೇವೆಯಲ್ಲಿ ಹಲವು ಬದಲಾವಣೆ ಮಾಡಿತ್ತು. ಇದೀಗ ಜನಜೀವನ ಸಹಜಸ್ಥಿತಿಗೆ ಬರುತ್ತಿರುವುದರಿಂದ ತನ್ನ ಹಳೆಯ ಸೇವೆಗಳನ್ನು ಮರುಪ್ರಾರಂಭಹಗೊಳಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಅದು ಪ್ರಕಟಣೆಯನ್ನು ಹೊರಡಿಸಿದ್ದು, ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲುಗಳಲ್ಲಿ ಸ್ಥಗಿತಗೊಂಡಿದ್ದ ಬೇಯಿಸಿದ ಊಟದ ಸೇವೆಯನ್ನು ಪುನರಾರಂಭಿಸುವುದಾಗಿ ರೈಲ್ವೆ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಸಾಂಕ್ರಾಮಿಕ ರೋಗದ ಕಾತರಣದಿಂದ ಹೇರಲಾಗಿದ್ದ ಲಾಕ್ಡೌನ್ ನಿರ್ಬಂಧಗಳು ಸಡಿಲವಾಗಿರುವುದರಿಂದ, ಸೇವೆಗಳನ್ನು ಪುನಃಸ್ಥಾಪಿಸಿ, ರೈಲುಗಳಲ್ಲಿ