ಬೆಂಗಳೂರು, ಆ. 12: ಅನೇಕ ಸಾಹಸಗಾಥೆಗಳ ಇತಿಹಾಸ ಹೊಂದಿರುವ ಇಸ್ರೋದ ಜಿಎಸ್ಎಲ್ವಿ ರಾಕೆಟ್ ಇಂದು ತನ್ನ ಮಿಷನ್ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸ್ಪೇಸ್ಪೋರ್ಟ್ನಿಂದ ಬೆಳಗ್ಗೆ ಜಿಎಸ್ಎಲ್ವಿ ಎಫ್10 (GSLV-F10) ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡರು ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಸೆಟಿಲೈಟನ್ನು ನಿಗದಿತ ಜಾಗಕ್ಕೆ ಬಿಡಲು ವಿಫಲಗೊಂಡಿದೆ. ತಾಂತ್ರಿಕ ದೋಷ ಇದಕ್ಕೆ ಕಾರಣ ಎನ್ನಲಾಗಿದೆ.