ನವದೆಹಲಿ : ಕಳೆದೆರಡು ವರ್ಷದಿಂದ ಸತತವಾಗಿ ಕಾಡುತ್ತಿರುವ ಕೊರೋನಾ ಸಮಸ್ಯೆ ಜನರಲ್ಲಿ ಹಲವು ಇತರ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಪ್ರಮುಖವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋದವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಜನರಲ್ಲಿ ಕೊರೋನಾ ಸಾಂಕ್ರಾಮಿಕ ಅವಧಿಯಲ್ಲಿ ಹೊರಹೊಮ್ಮಿದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಬಜೆಟ್ನಲ್ಲಿ ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ.ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಜೊತೆ ಸೇರಿ ಕೇಂದ್ರ ಈ ಮಾನಸಿಕ ಆರೋಗ್ಯ ಸಮಸ್ಯೆಗೆ