ಬೆಂಗಳೂರು : ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದಾಗಿ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ. ಇಂದು (ಗುರುವಾರ) ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಕಚೇರಿ ಪೂಜೆ ಮಾಡಿ ಕಾರ್ಯಾರಂಭ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡ್ತೇವೆ.ಈ ವರ್ಷ ಮಾಡಲ್ಲ ಮುಂದಿನ ವರ್ಷ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರ್ತಾ ಇದೆ. ಮಕ್ಕಳು ತಪ್ಪು ಓದಬಾರದು, ತಪ್ಪು ಪಠ್ಯಗಳನ್ನು ಮುಂದಿನ ವರ್ಷದ ತನಕ ಕಾಯಬೇಕಿಲ್ಲ.