ದೇಶಾದ್ಯಂತ ಕೊವಿಡ್ 19 ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. ಹಾಗೇ ಇನ್ನೇನು ಶೀಘ್ರದಲ್ಲೇ 100 ಕೋಟಿಯ ದಾಖಲೆ ತಲುಪಲಿದೆ.ಇದೊಂದು ಮೈಲಿಗಲ್ಲು ತಲುಪಲಿರುವ ಹೊತ್ತಲ್ಲೇ ಕೊವಿಡ್ 19 ಲಸಿಕಾ ಗೀತೆಯೊಂದು ರಚನೆಗೊಂಡಿದೆ. ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಆಡಿಯೋ, ವಿಷ್ಯುವಲ್ (ಧ್ವನಿ ಮತ್ತು ದೃಶ್ಯ) ಲಸಿಕೆ ಗೀತೆಯನ್ನು ಕೇಂದ್ರ ಸರ್ಕಾರ ಇಂದು ದೆಹಲಿಯ ಶಾಸ್ತ್ರಿ ಭವನ್ದಲ್ಲಿ ಬಿಡುಗಡೆ ಮಾಡಿದ್ದು, ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ