ಸಮ್ಮಿಶ್ರ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ. ಮಂತ್ರಿ ಮಂಡಲ ರಚಿಸುವ ಸಂದರ್ಭದಲ್ಲಿ ಇವರ ಕಿತ್ತಾಟ ಆರಂಭವಾಗುತ್ತದೆ. ಬಹುಮತ ಸಾಬೀತು ಮಾಡುವ ಸಂದರ್ಭದಲ್ಲೇ ಸರ್ಕಾರ ಬಿದ್ದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಇರಬಾರದೆಂದು ಜನ ಬಿಜೆಪಿ ಗೆ ಆಶೀರ್ವಾದ ಮಾಡಿದ್ದರು. ಆದರೆ ಜೆಡಿಎಸ್, ಕಾಂಗ್ರೆಸ್ ಜನಾದೇಶವನ್ನು ಧಿಕ್ಕರಿಸಿವೆ ಎಂದು ಆರೋಪಿಸಿದರು. ಮತ್ತೆ ಅವಕಾಶ ಬಂದರೆ ಸರ್ಕಾರ ರಚಿಸಲು ಬಿಜೆಪಿ