ಆಂಧ್ರಪ್ರದೇಶದ ಉದ್ಯಮಿಯೊಬ್ಬರಿಗೆ ಬಂಗಾರ ಎಂದು ಹಿತ್ತಾಳೆಯ ಚೂರುಗಳನ್ನು ಕೊಟ್ಟು 35 ಲಕ್ಷ ರೂ. ವಂಚನೆ ಮಾಡಿದ ಆರೋಪಿಯನ್ನು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಪೊಲೀಸರು ಬಂಧಿಸಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಗಳೂರು ತಾಲೂಕಿನ ಹುಚ್ಚವನಹಳ್ಳಿ ತಿಪ್ಪೇಸ್ವಾಮಿ ಬಂಧಿತ ಆರೋಪಿ. ಬಂಧಿತನಿಂದ 30 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ನಲ್ಲೂರಿನ ಉದ್ಯಮಿ ವಿ.ಲಕ್ಷ್ಮಣ ರೆಡ್ಡಿ ಎಂಬುವವರಿಗೆ ಮಾ. 3 ರಂದು ಆರೋಪಿ ಫೋನ್ ಮಾಡಿದ್ದಾನೆ.