ಜಾಮೀನು ಕೋರಿ ದುನಿಯಾ ವಿಜಯ್ ಸಲ್ಲಿಸಿದ ಅರ್ಜಿ ವಜಾ ಗೊಳಿಸಿದ ಕೋರ್ಟ್

ಬೆಂಗಳೂರು, ಗುರುವಾರ, 27 ಸೆಪ್ಟಂಬರ್ 2018 (08:41 IST)

ಬೆಂಗಳೂರು : ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.


ಜಿಮ್ ಟ್ರೈನರ್ ಮಾರುತಿ ಗೌಡ ಅವರನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಕ್ಕೆ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರಿಗೆ ಕೋರ್ಟ್ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕೆಂದು ಆದೇಶಿಸಿದೆ.


ಆದಕಾರಣ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರು ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದ 8ನೇ ಎಸಿಎಂಎಂ ಕೊರ್ಟ್ ಇಂದು ವಿಜಯ್ ಮತ್ತು ಅವರ ಸಹಚರರ ಜಾಮೀನು ತಿರಸ್ಕರಿಸಿ ತೀರ್ಪು ನೀಡಿದೆ. ಮೇಲಿನ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿ ವಿಜಯ್ ಪರ ವಕೀಲರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸರ ಎದುರೇ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆಗೈದ ದುಷ್ಕರ್ಮಿ

ಹೈದರಾಬಾದ್ : ಜನ ಸಂಚಾರವಿರುವ ರಸ್ತೆಯ ಮಧ್ಯದಲ್ಲಿ ಪೊಲೀಸರ ಎದುರೇ ದುಷ್ಕರ್ಮಿಯೊಬ್ಬ ವ್ಯಕ್ತಿಯೊರ್ವನನ್ನು ...

news

ನೋಡಲು ಬಂದ ಮೊದಲ ಪತ್ನಿಗೆ ದುನಿಯಾ ವಿಜಿ ಹೇಳಿದ್ದೇನು?

ಬೆಂಗಳೂರು: ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಮತ್ತು ಸಹಚರರ ...

news

ಪ್ರೀತಿಸಿ ಮದುವೆಯಾಗಿ 13 ವರ್ಷದ ನಂತರ ಮನೆಗೆ ಬಂದ ಮಹಿಳೆಗೆ ಸಹೋದರ ಮಾಡಿದ್ದೇನು ಗೊತ್ತಾ?

ಗದಗ : ಇತ್ತೀಚೆಗೆ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದೀಗ 13 ವರ್ಷದ ಹಿಂದೆ ...

news

ಬಸ್ ಪ್ರಯಾಣ ಏರಿಕೆಗೆ ತಡೆ ನೀಡಲಾಗಿದೆ ಎಂದ ಸಿಎಂ

ಇತ್ತೀಚಿನ ದಿನಗಳಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಹೀಗಾಗಿ ಕರ್ನಾಟಕ ರಾಜ್ಯ ...