ಸಿಗರೇಟ್ ಕೊಡದ ಕಾರಣಕ್ಕೆ ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ

ನವದೆಹಲಿ| pavithra| Last Modified ಮಂಗಳವಾರ, 2 ಅಕ್ಟೋಬರ್ 2018 (10:53 IST)
ನವದೆಹಲಿ : ಸಿಗರೇಟ್ ಕೊಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ 29 ವರ್ಷದ ಯುವಕ ಹಾಗೂ ಆತನ ಸ್ನೇಹಿತನನ್ನು ರಾಡ್ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕರನ್ನು ಗೌರವ್ ಪಟಿಯಾಲ್ ಹಾಗೂ ರೋಹಿತ್ ಬಿಷ್ಟ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಕೊನ್ನಾಗ್ಟ್ ಪ್ರದೇಶದಲ್ಲಿ ಸಿಗರೇಟ್ ಸೇದುತ್ತಿದ್ದರು. ಇದೇ ವೇಳೆ ಅಪರಿಚಿತ ವ್ಯಕ್ತಿಯೋರ್ವ ಗೌರವ್ ಪಟಿಯಾಲ್ ಬಳಿ ಸಿಗರೇಟ್ ನೀಡುವಂತೆ ಕೇಳಿದ್ದಾನೆ.


ಗೌರವ್ ಬಳಿ ಹೆಚ್ಚಿನ ಸಿಗರೇಟ್ ಇಲ್ಲದ ಕಾರಣ ಆತ ಅಪರಿಚಿತನಿಗೆ ಸಿಗರೇಟ್ ನೀಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡು ಹೊರಟುಹೋದ ಆತ ತನ್ನ ಒಂದಿಷ್ಟು ಗೆಳೆಯರೊಂದಿಗೆ ಮತ್ತದೇ ಸ್ಥಳಕ್ಕೆ ಬಂದು ಗೌರವ್ ಪಟಿಯಾಲ್ ಹಾಗೂ ರೋಹಿತ್ ಬಿಷ್ಟ್ ಮೇಲೆ
ರಾಡ್ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.ಘಟನೆಯಲ್ಲಿ ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದೆ. ಗೌರವ್​ಗೆ​ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಟಿಚ್​​ ಮಾಡಲಾಗಿದೆ. ರೋಹಿತ್​​ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಸೆಕ್ಷನ್ 308ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
.


ಇದರಲ್ಲಿ ಇನ್ನಷ್ಟು ಓದಿ :