ನವದೆಹಲಿ : ಈಗಾಗಲೇ ಬೆಲೆ ಏರಿಕೆಯ ಹೊಡೆತ ಅನುಭವಿಸುತ್ತಿರುವ ದೇಶದ ಜನತೆಗೆ, ಸರ್ಕಾರ ಮತ್ತೆ ಭಾರೀ ಪ್ರಮಾಣದ ತೆರಿಗೆ ದರ ಏರಿಕೆ ಶಾಕ್ ನೀಡಲು ಸಜ್ಜಾಗಿದೆ.ಹಾಲಿ ಇರುವ ಶೇ.5, 12,18 ಮತ್ತು ಶೇ.28ರ ಸ್ತರ ಬದಲಾಯಿಸಲು ನಿರ್ಧರಿಸಿರುವ ಸರ್ಕಾರ, ಅದರ ಜೊತೆಜೊತೆಗೆ ಸುಮಾರು 143 ವಸ್ತುಗಳನ್ನು ಹೊಸ ತೆರಿಗೆ ಸ್ತರಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ರಾಜ್ಯಗಳ ಮುಂದಿಟ್ಟಿದೆ.ಒಂದು ವೇಳೆ ಕೇಂದ್ರೀಯ ಜಿಎಸ್ಟಿ ಮಂಡಳಿಯ ಪ್ರಸ್ತಾಪವನ್ನು ರಾಜ್ಯಗಳು ಒಪ್ಪಿಕೊಂಡರೆ, ಶೀಘ್ರವೇ 143 ವಸ್ತುಗಳ