ಬೆಂಗಳೂರು(ಆ.02): ಕಳೆದೊಂದು ವಾರದಿಂದ ರಾಜ್ಯ ಸೇರಿದಂತೆ ಇಡೀ ದೇಶದಾದ್ಯಂತ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹಲವೆಡೆ ಸಾಕಷ್ಟು ಅನಾಹುತಗಳಾಗಿವೆ. ಕಳೆದ ತಿಂಗಳು ಉತ್ತರ ಭಾರತದಲ್ಲಿ ಸುರಿದ ಭಾರೀ ಮಳೆಗೆ ಜಲಪ್ರಳಯವೇ ಅಗಿತ್ತು.