ಬೆಂಗಳೂರು : `ಬೆಳಗ್ಗೆ ಎದ್ದರೆ ಸಾಕು ಹೊರಗೆ ಕಾಲಿಡೋಕೆ ಆಗಲ್ಲ, ಚಳಿಯಪ್ಪಾ ಚಳಿ’ ಇದು ಸದ್ಯ ಬೆಂಗಳೂರಿನ ಪರಸ್ಥಿತಿ. ಹಾಗಾಗಿ ಚಳಿ ಇನ್ನೂ ಎಷ್ಟು ದಿನ ಇರುತ್ತೆ? ಇದ್ರಿಂದ ಜನರ ಆರೋಗ್ಯದಲ್ಲಾದ ಏರುಪೇರುಗಳೇನು? ಅನ್ನೋ ಚಿಂತೆ ಜನರಲ್ಲಿ ಮನೆ ಮಾಡಿದ್ದು, ಹವಾಮಾನ ಇಲಾಖೆ ಆರೋಗ್ಯ ಸಲಹೆ ನೀಡಿದೆ.ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಬೆಂಗಳೂರಿಗೂ ಸಹ ಕೊರವ ಚಳಿಯ ಎಫೆಕ್ಟ್ ತಟ್ಟಿದ್ದು, ಸಿಲಿಕಾನ್ ಸಿಟಿ ಜನ ಥಂಡಾ ಹೊಡೆದಿದ್ದಾರೆ.