ಪ್ರವಾಹ ಪೀಡಿತರ ನೆರವಿಗೆ ಹಣ ನೀಡಲು ಈ ಪತ್ರಕರ್ತ ಮಾಡಿದ ಕೆಲಸ ಮೆಚ್ಚಲೆಬೇಕು

ತಿರುವನಂತಪುರಂ| pavithra| Last Modified ಶನಿವಾರ, 18 ಆಗಸ್ಟ್ 2018 (15:59 IST)
: ಪತ್ರಕರ್ತರೊಬ್ಬರು
ಮಗಳ
ಕ್ಯಾನ್ಸಲ್ ಮಾಡಿ
ಕೇರಳದ ಪ್ರವಾಹ ಪೀಡಿತರ ನೆರವಿಗೆ ನಿಂತ ಘಟನೆ ಕೇರಳದ ಕನ್ನೂರಿನಲ್ಲಿ ನಡೆದಿದೆ.

ಮನೋಜ್ ಎಂಬವರ ಮಗಳ ನಿಶ್ಚಿತಾರ್ಥ ಭಾನುವಾರ ಕನ್ನೂರಿನಲ್ಲಿ ನಡೆಯಬೇಕಿತ್ತು. ಆದರೆ ಕೇರಳದಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿರುವುದನ್ನು ಮನಗೊಂಡ ಮನೋಜ್ ಮಗಳ ನಿಶ್ಚಿತಾರ್ಥಕ್ಕೆ ಮೀಸಲಿರಿಸಿದ್ದ ಹಣವನ್ನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.


ಈ ವಿಚಾರವನ್ನು ಮನೋಜ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ‘ ಹಲವು ದಿನಗಳಿಂದ ನಮ್ಮ ರಾಜ್ಯದಲ್ಲಿಯೇ ಪ್ರವಾಹ ಉಂಟಾಗಿ ಜನರು ತೊಂದರೆಯಲ್ಲಿದ್ದಾರೆ. ಈ ವೇಳೆಯಲ್ಲಿ ನಾವು ನಿಶ್ಚಿತಾರ್ಥವನ್ನು ಮಾಡುವುದು ಸರಿಯಲ್ಲ ಹೀಗಾಗಿ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿದ್ದೇವೆ. ಭಾನುವಾರ ಕೇವಲ ಉಂಗುರವನ್ನು ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.


ಹಾಗೇ ಎರಡು ಕುಟುಂಬಸ್ಥರು ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡುವುದರ ಬಗ್ಗೆ ಚರ್ಚಿಸಿ ಈ ನಿರ್ಣಯ ತೆಗೆದುಕೊಂಡಿದ್ದು, ನಿಶ್ಚಿತಾರ್ಥಕ್ಕೆ ಮೀಸಲಿರಿಸಿದ್ದ ಹಣವನ್ನ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದ್ದೇವೆ ಎಂದು ಮನೋಜ್ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :