ತಿರುವನಂತಪುರಂ : ಕೇರಳದಲ್ಲಿ ಕೋವಿಡ್-19 ನಿರ್ಬಂಧಗಳನ್ನು ಮತ್ತಷ್ಟು ಸಡಿಸಲಾಗಿದ್ದು, ಅಕ್ಟೋಬರ್ 25 ರಿಂದ ಚಿತ್ರಮಂದಿರಗಳು ಮತ್ತು ಒಳಾಂಗಣ ಕ್ರೀಡಾಂಗಣಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯ ನಂತರ ಕೇರಳ ಸರ್ಕಾರ ಮತ್ತಷ್ಟು ಸಡಿಲಿಕೆಗಳನ್ನು ಘೋಷಿಸಿತು. ಚಿತ್ರಮಂದಿರಗಳ ಸಿಬ್ಬಂದಿ ಮತ್ತು ವೀಕ್ಷಕರು ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದಿರುವುದು ಕಡ್ಡಾಯ. ಶೇ. 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು