ಕೋಟ್ಟಯಂನ 104 ವರ್ಷದ ಕುಟ್ಟಿಯಮ್ಮ ಎನ್ನುವ ವೃದ್ಧೆಯೇ ಈ ಸಾಧನೆ ಮಾಡಿದ ಛಲಗಾತಿ. ಈವರೆಗೂ ಶಾಲೆಯ ಮೆಟ್ಟಿಲನ್ನೇ ನೋಡದ ಕುಟ್ಟಿಯಮ್ಮ, ರಾಜ್ಯ ಸರ್ಕಾರ ನಡೆಸುವ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದು ಮಾತ್ರವಲ್ಲದೇ ಶೇ. 89 ರಷ್ಟು ಅಂಕ ಪಡೆದು, ವಯಸ್ಸು ಕೇವಲ ನಂಬರ್ ಎಂದು ಸಾಬೀತು ಮಾಡಿದ್ದಾರೆ. ಅಲ್ಲದೇ ನಾಲ್ಕನೇ ತರಗತಿಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಕುಟ್ಟಿಯಮ್ಮ ಈ ಸಾಧನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರಗಳೇ ಹರಿದು