ಸಂಸತ್ತಿನಲ್ಲಿ ಬಜೆಟ್ ಅಧಿವೇಶನವು ಇಂದಿನಿಂದ (ಮಾರ್ಚ್ 14) ಮತ್ತೆ ಆರಂಭವಾಗಲಿದೆ. ಅಧಿವೇಶನದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಉಕ್ರೇನ್ ಯುದ್ಧವನ್ನು ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿತು.ಬಜೆಟ್ ಅಧಿವೇಶನವು ಈ ಮೊದಲು ಫೆಬ್ರುವರಿ 1ರಿಂದ 11ರವರೆಗೆ ನಡೆದಿತ್ತು. ಇಂದಿನಿಂದ ಮತ್ತೆ ಅರಂಭವಾಗಲಿರುವ ಅಧಿವೇಶನದ ಬಗ್ಗೆ ನೀವು ತಿಳಿಯಬೇಕಿರುವ 10 ಮುಖ್ಯ ಮಾಹಿತಿ ಇಲ್ಲಿದೆ. 1. ಭಾರತದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಈ ಬಾರಿ ಸಂಸತ್ ಅಧಿವೇಶನದಲ್ಲಿ ನಿರ್ಬಂಧಗಳು ಮೊದಲಿನಷ್ಟು