ನವದೆಹಲಿ : ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಕಳೆದ ವರ್ಷ 125 ಹುಲಿಗಳು ಸಾವನ್ನಪ್ಪಿವೆ. ಅದೇ ರೀತಿ 2020ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದವು ಎಂದು ಸರ್ಕಾರ ಗುರುವಾರ ತಿಳಿಸಿದೆ.ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ 2019ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದರೆ, 2021ರಲ್ಲಿ ಹುಲಿಗಳ ಸಾವಿನ ಸಂಖ್ಯೆ 127ಕ್ಕೆ ಏರಿಕೆಯಾಗಿದೆ ಎಂದು