ಕೋಲಾರ : ಟೊಮೆಟೋ ಬೆಳೆ ಅಂದರೆ ಅದು ಕೆಂಪು ಚಿನ್ನದ ವಹಿವಾಟು, ಇನ್ನೊಂದು ಅರ್ಥದಲ್ಲಿ ಟೊಮೆಟೋ ಬೆಳೆಯೋದು ಜೂಜು ಎನ್ನಲಾಗುತ್ತದೆ. ಆ ಬೆಳೆಯನ್ನು ನಂಬಿದ ಅದೆಷ್ಟೋ ರೈತರು ಕೈತುಂಬಾ ಹಣ ನೋಡಿದವರಿದ್ದಾರೆ, ಅಷ್ಟೇ ಮಂದಿ ಕೈಸುಟ್ಟುಕೊಂಡವರೂ ಇದ್ದಾರೆ. ಚಿನ್ನದ ನಾಡು ಕೋಲಾರದಲ್ಲಿ ಕೆಜಿಎಫ್ ಚಿನ್ನದ ಗಣಿ ಬಿಟ್ಟರೆ ಕೆಂಪು ಚಿನ್ನ ಎಂದು ಕರೆಯಲ್ಪಡುವ ಟೊಮೆಟೋ ಬೆಳೆ ಕೂಡ ಇಲ್ಲಿಯ ಜನರಿಗೆ ಒಂದು ಪ್ರಮುಖ ಬೆಳೆ.ಜಿಲ್ಲೆಯೊಂದರಲ್ಲಿಯೇ ಅಂದಾಜು 46 ಸಾವಿರ